ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಹೇಗೆ ಮಾಡುವುದು?
ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಹೇಗೆ ಮಾಡುವುದು?
ನಮಸ್ಕಾರ ಸ್ನೇಹಿತರೆ ಪ್ರಧಾನ ಮಂತ್ರಿ ಹೊರಡಿಸಿರುವ ಡಿಜಿಟಲ್ ಹೆಲ್ತ್ ಮಿಷನ್ ( ayushmaan bharat Jan arogya yojana) ಅಡಿಯಲ್ಲಿ ದೇಶದ ಪ್ರತಿ ಪ್ರಜೆಯೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದೇ ABHA ಆಯುಷ್ಮಾನ್ ಕಾರ್ಡ್. ಹಾಗಾದರೆ ABHA ಎಂದರೇನು? ಇದನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಯೋಣ.
ABHA ಎಂದರೆ ಏನು?
ಭಾರತ ದೇಶದ ಪ್ರತಿಯೊಂದು ಪ್ರಜೆಯ ಆರೋಗ್ಯದ ಸಂಪೂರ್ಣ ಮಾಹಿತಿ ಒಂದು ಡಿಜಿಟಲ್ ಕಾರ್ಡಿನಲ್ಲಿ ಒಳಗೊಂಡಿರುತ್ತದೆ. ಈ ಕಾರ್ಡ್ ಗೆ ಆಯುಷ್ಮನ್ ಭಾರತ್ ಹೆಲ್ತ್ ಅಕೌಂಟ್ ( Ayushman bharat health account) ಎನ್ನುತ್ತಾರೆ. ಈ ಕಾರ್ಡ್ನಲ್ಲಿ ರೋಗಿಯು ತಾನು ಆಸ್ಪತ್ರೆಗೆ ದಾಖಲಾದ ಮಾಹಿತಿ, ವೈದ್ಯರಿಂದ ಪಡೆದುಕೊಂಡ ಚಿಕಿತ್ಸೆಯ ಎಲ್ಲ ವಿವರಗಳನ್ನು ಇದರಲ್ಲಿ ಹಾಕಲಾಗುತ್ತದೆ.
Cylinder QR code: ಇನ್ಮುಂದೆ ಸಿಲಿಂಡರ್ ಗೆ ಕ್ಯೂಆರ್ ಕೋಡ್, ಮಾಹಿತಿ ಇಲ್ಲಿದೆ.
ಒಂದು ಸಲ ಈ ಕಾರ್ಡ್ ಪಡೆದುಕೊಂಡ ಮೇಲೆ ನೀವು ದೇಶದ ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ABHA ಕಾರ್ಡ್ ಉಪಯೋಗವೇನು?
ಕಾರ್ಡ್ ಪಡೆದ ಮೇಲೆ ರೋಗಿಯು ದೇಶದ ಯಾವ ಆಸ್ಪತ್ರೆ, ವೈದ್ಯರನ್ನು ಬೇಟಿ ಮಾಡಿದ ವರದಿ, ಅವರು ನೀಡಿದ ಚಿಕಿತ್ಸೆ, ಹಾಗೂ ಇನ್ನಿತರ ಹಲವಾರು ವಿಷಯಗಳು ಕಾರ್ಡಿನಲ್ಲಿ ಒಳಗೊಂಡಿರುತ್ತವೆ.
ಮುಂದಿನ ದಿನಗಳಲ್ಲಿ ರೋಗಿಯು ವೈದ್ಯರನ್ನು ಭೇಟಿ ಮಾಡಿದರೆ ಅವರ ಎಲ್ಲಾ ಹಿಂದಿನ ವಿಷಯಗಳು ತಿಳಿಯುತ್ತವೆ, ಮತ್ತು ವೈದ್ಯರಿಗೆ ಚಿಕಿತ್ಸೆ ನೀಡಲು ತುಂಬಾ ಸುಲಭ ಆಗುತ್ತದೆ. ಇದರಿಂದ ರೋಗಿಯು ತನ್ನ ಎಲ್ಲಾ ಚಿಕಿತ್ಸೆಯ ರಿಪೋರ್ಟ್ಸ ಗಳನ್ನೂ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅವೆಲ್ಲ ಈ ಕಾರ್ಡಿನಲ್ಲಿ ಶೇಖರಣೆಯಾಗಿರುತ್ತದೆ.
ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ತಹಶೀಲ್ದಾರ್ ಗೆ ಪತ್ರ : farmers
ನೀವು ABHA ಕಾರ್ಡ್ ಹೊಂದಿದ್ದಲ್ಲಿ ಇದು ವೈದ್ಯರಿಗೆ( Doctor) ಇನ್ನೂ ಸುಲಭವಾಗುತ್ತದೆ. ಏಕೆಂದರೆ ರೋಗಿಯ ಹಿಂದಿನ ಚಿಕಿತ್ಸೆಯ ಎಲ್ಲಾ ವಿಷಯಗಳನ್ನು ಇದರಲ್ಲಿ ಹಾಕಲಾಗುತ್ತದೆ. ಹಾಗಾಗಿ ವೈದ್ಯರು ಸುಲಭವಾಗಿ ರೋಗಿಯ ಎಲ್ಲ ರೀತಿಯ ವಿಷಯಗಳನ್ನು ತಿಳಿದುಕೊಂಡು, ಸರಿಯಾಗಿ ರೋಗಿಯ ಆರೋಗ್ಯವನ್ನು ಗುಣ ಪಡಿಸಬಹುದು.
ಹಾಗಾದರೆ ABHA ಕಾರ್ಡ್ ಮಾಡಿಕೊಳ್ಳೋದು ಹೇಗೆ..?
1.ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: https://healthid.ndhm.gov.in/login
- ಆನಂತರ create ABHA CARD ಮೇಲೆ ಕ್ಲಿಕ್ ಮಾಡಿ
- ಮುಂದೆ Using ಆಧಾರ್ ಕಾರ್ಡ್ click ಮಾಡಿ, next ಐಕಾನ್ click ಮಾಡಿ.
- ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಿ, I agree ಯನ್ನು ಕ್ಲಿಕ್ ಮಾಡಿ, ಆಮೇಲೆ im not robot ಕ್ಲಿಕ್ ಮಾಡಿ,next ಒತ್ತಿ.
- ಅಷ್ಟಾದ ಮೇಲೆ ನಿಮ್ಮ ಆಧಾರ್ (adhar) ಕಾರ್ಡ್ ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆಯೋ ಆ ನಂಬರ್ಗೆ ಒಂದು OTP ( ONE TIME PASSWORD) ಬರುತ್ತದೆ. ಆ OTP ಯನ್ನು ಟೈಪ್ ಮಾಡಿ next ಒತ್ತಿ.
- ಆಮೇಲೆ Adhar card ಓಪನ್ ಆಗುತ್ತದೆ, ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಒಳಗೆ ಇರುವ ಎಲ್ಲ ಮಾಹಿತಿ ತೋರಿಸುತ್ತದೆ, next ಒತ್ತಿರಿ.
- ಆಮೇಲೆ ನಿಮ್ಮ 10 ಸಂಖ್ಯೆಯ ಮೊಬೈಲ್ ನಂಬರ್ enter ಮಾಡಿ,
- ಕೊನೆಗೆ ನಿಮ್ಮ ABHA ಕಾರ್ಡ್ ಸಂಖ್ಯೆಯನ್ನು ತೋರಿಸುತ್ತದೆ, ಅದನ್ನು ಬರೆದುಕೊಂಡು, DOWNLOAD ಆಪ್ಷನ್ ( option) ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಯುಷ್ಮಾನ್ ಹೆಲ್ತ್ ಕಾರ್ಡ್ ಮನೆಯಲ್ಲೇ ಪಡೆದುಕೊಳ್ಳಬಹುದು.
ಈ ABHA ಕಾರ್ಡ್ ಪಡೆಯಲು ನೀವು ಯಾರಿಗೂ ಹಣ ಕೊಡುವ ಅವಶ್ಯಕತೆ ಇಲ್ಲ. ಇದರಿಂದ ನಿಮಗೆ ಇನ್ನೊಂದು ಉಪಯೋಗವೆಂದರೆ ನಿಮ್ಮ ಖಾಸಗಿ ದಾಖಲೆಗಳನ್ನು ಗೌಪ್ಯವಾಗಿ ಇಡಬಹುದು.
ಇಲ್ಲಿ ತಿಳಿಸಿದ ವಿಧಾನದ ಮೂಲಕ ನಿಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಹಾಗೂ ಗುರುತು ಕಾರ್ಡ್ನ ಸಹಾಯದ ಮೂಲಕ, ನಿಮ್ಮ ನಿಮ್ಮ ಮೊಬೈಲ್ಗಳಲ್ಲಿ ಕಾರ್ಡ್ ನ್ನು ಸುಲಭವಾಗಿ, ಹಣ ವ್ಯಯ ಮಾಡದೇ ಮಾಡಿಕೊಳ್ಳಿ.
ನಮ್ಮ ಮಾಹಿತಿ ಜಗತ್ತು ವೆಬ್ಸೈಟ್ ಎಲ್ಲರೂ subscribe ಮಾಡಿಕೊಳ್ಳಿ.